ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಧರ್ಮರಾಯ ಮಹಾಭಾರತದ ರಾಮ: ಎಂ.ಎಲ್. ಸಾಮಗ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಒಕ್ಟೋಬರ್ 21 , 2013
ಒಕ್ಟೋಬರ್ 21 , 2013

ಧರ್ಮರಾಯ ಮಹಾಭಾರತದ ರಾಮ: ಎಂ.ಎಲ್. ಸಾಮಗ

ಸುಳ್ಯ : ರಾಮಾಯಣದಲ್ಲಿ ಹೇಗೆ ರಾಮ ಧರ್ಮಜ್ಞನಾಗಿದ್ದನೋ ಅದೇ ರೀತಿ ಮಹಾಭಾರತದಲ್ಲಿ ಧರ್ಮರಾಯ ಧರ್ಮಜ್ಞನಾಗಿದ್ದಾನೆ. ಧರ್ಮರಾಯ ಕ್ಷತ್ರಿಯ ಕುಲದಲ್ಲಿ ಹುಟ್ಟಿದ್ದರೂ ಸ್ವಭಾವತಃ ಬ್ರಾಹ್ಮಣ ನಂತಿದ್ದು, ಎಲ್ಲ ಕಡೆ ಮತ್ತು ಹಂತದಲ್ಲಿ ಅವನ ಸಾತ್ವಿಕ ಗುಣ ಅನಾವರಣಗೊಳ್ಳುತ್ತದೆ. ಅವನು ಒಬ್ಬ ಆದರ್ಶವಾದಿ, ವೌಲ್ಯಗಳ ಪ್ರತಿಪಾದಕ: ಹೀಗೆಂದು ಧರ್ಮರಾಯನ ಬಗ್ಗೆ ವಿವರಣೆ ನೀಡಿದರು ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟಪೂರ್ವಾಧ್ಯಕ್ಷ ಪ್ರೊ. ಮಲ್ಪೆ ಲಕ್ಷ್ಮಿನಾರಾಯಣ ಸಾಮಗ.

ಅವರು ಭಾನುವಾರ ಇಲ್ಲಿನ ಸ್ನೇಹ ಶಾಲಾ ಆವರಣದಲ್ಲಿ ನಡೆಯುತ್ತಿರುವ 11 ದಿನಗಳ ಕನ್ನಡ ಸಾಹಿತ್ಯ ಮತ್ತು ಯಕ್ಷಗಾನ ಕಲಾ ರಾಜ್ಯ ಮಟ್ಟದ ಕಾರ್ಯಗಾರದ 4ನೇ ದಿನದ ಕಾರ್ಯಕ್ರಮ 'ಕನ್ನಡ ಕಾವ್ಯಗಳಲ್ಲಿ ಪೌರಾಣಿಕ ಪಾತ್ರ ಚಿಂತನೆ'ಯಲ್ಲಿ 'ಧರ್ಮಭೀರು ಧರ್ಮರಾಯ' ಎಂಬ ವಿಷಯ ಮಂಡಿಸಿದರು.

ಧರ್ಮರಾಯನ ಕಾಳಜಿ ಇರುವುದು ಧರ್ಮದ ಬಗ್ಗೆ. ದೃಢ ನಿಲುವುಗಳನ್ನು ಎಲ್ಲ ಸಂದರ್ಭದಲ್ಲಿ ಪ್ರದರ್ಶನ ಮಾಡಿದ್ದಾನೆ. ಪಾಪಪ್ರಜ್ಞೆಯೂ ಸದಾ ಕಾಲದಲ್ಲಿತ್ತು. ಇದು ಪಾಂಡವರಿಗೆ ಹಿನ್ನಡೆಯೂ ಆಗಿರಬಹುದು. ನನ್ನ ಕುಟುಂಬದ ಸರ್ವನಾಶಕ್ಕೆ ಕಾರಣವಾಗಿದ್ದೇನೆ. ಆದುದರಿಂದ ನಾನು ವನವಾಸಕ್ಕೆ ಹೊರಡುತ್ತಾನೆ. ಅಷ್ಟು ಧರ್ಮಕ್ಕೆ ಬೆಲೆಕೊಟ್ಟವನು ಧರ್ಮರಾಯ ಎಂದು ಪ್ರೊ. ಎಲ್.ಎನ್. ಸಾಮಗ ವಿವರಿಸಿದರು.

ತನ್ನವರಿಗೆ ತನ್ನಿಂದ ಯಾವುದೇ ರೀತಿ ನೋವು ಆಗಬಾರದು ಎಂಬ ದೃಢ ನಿಲುವು ಹೊಂದಿದ್ದ ಧರ್ಮರಾಯ. ಅವನ ನೀತಿ ನಮ್ಮ ಎಲ್ಲ ಧರ್ಮ ಗಳಲ್ಲೂ, ಮತದಲ್ಲೂ ಇದೆ. ಅದು ಲೋಕನೀತಿ ಎಂದರು ಸಾಮಗ.

ಧರ್ಮಜ್ಞನನ್ನು ನೆನೆಸಿಕೊಂಡರೆ ನಮ್ಮಲ್ಲೂ ಅ ಪ್ರಜ್ಞೆ ಮೂಡುತ್ತದೆ. ಧರ್ಮರಾಯನ ಬಗ್ಗೆ ಕವಿವರ್ಯರೂ ವಿವರಿಸಿದ್ದಾರೆ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ತಹಸೀಲ್ದಾರ್ ಕೆ. ಮೋಹನ್ ರಾವ್ ಹೇಳಿದರು.

ಪಾತನಾಡ್ಕ ಶ್ಯಾಮ್ ಭಟ್ ಅಗಲಿದ ಯಕ್ಷಗಾನ ಕಲಾವಿದ ದಿ. ದೇರಾಜೆ ಸೀತಾರಾಮಯ್ಯ ಅವರ ಸಂಸ್ಮರಣೆ ಮಾಡಿದರು. ಕಾರ್ಯಕ್ರಮ ಸಂಯೋಜಕ ಡಾ. ಚಂದ್ರಶೇಖರ ದಾಮ್ಲೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ. ವೀಣಾ ಫಾಲಚಂದ್ರ ಕಾರ್ಯಕ್ರಮ ನಿರೂಪಿಸಿದರು. ದ್ರೌಪದಿ ಸ್ವಯಂವರ, ಗಜನೋಹಿ, ಐರಾವತ ಪ್ರಸಂಗ ಪ್ರದರ್ಶನಗೊಂಡಿತು.

ಇಂದಿನ ಕಾರ್ಯಕ್ರಮ: ಮಧ್ಯಾಹ್ನ 2ರಿಂದ 5ರವರೆಗೆ ಸುಭದ್ರ ಕಲ್ಯಾಣ ಯಕ್ಷಗಾನ ಪ್ರದರ್ಶನ ಬಳಿಕ 'ಛಲದಂಕಮಲ್ಲ ದುರ್ಯೋಧನ' ಪಾತ್ರದ ಬಗ್ಗೆ ಪ್ರೊ.ಕಬ್ಬಿನಾಲೆ ವಸಂತ್ ಭಾರದ್ವಾಜ್ ಅವರಿಂದ ಉಪನ್ಯಾಸ. ಅ ಬಳಿಕ 6ರಿಂದ 9ರವರೆಗೆ ರಾಜಸೂಯ, ಮಾಗಧ, ಶಿಶುಪಾಲ ವಧೆ ಪ್ರಸಂಗ ಪ್ರದರ್ಶನ. ಸಚಿವರಿಗೆ ರಾಮಾಯಣ ಕರ್ತೃ ಗೊತ್ತಿಲ್ಲದ್ದು ವಿಪರ್ಯಾಸ

ವಾಲ್ಮೀಕಿ ಮಹಾಭಾರತ ಬರೆದರು ಎಂಬ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ ಅವರ ಹೇಳಿಕೆ ಶೋಚನೀಯ ಎಂದು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಹೇಳಿದರು. ರಾಮಾಯಣ ಬರೆದದ್ದು ಯಾರು ಎಂಬ ವಿಷಯ ಸಚಿವರಿಗೆ, ಅದರಲ್ಲೂ ಸಂಸ್ಕೃತಿ ಸಚಿವರಿಗೆ ಗೊತ್ತಿಲ್ಲದೇ ಇರುವುದು ವಿಪರ್ಯಾಸ ಎಂದು ಆಕ್ಷೇಪಿಸಿದರು. ಯಕ್ಷಗಾನ ಅಕಾಡೆಮಿಗೆ ಈ ವರೆಗೆ ಅಧ್ಯಕ್ಷರಾದ ಕುಂಬ್ಳೆ ಮತ್ತು ಸಾಮಗರಿಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಕೃಪೆ : http://vijaykarnataka.indiatimes.com/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ